Kannada Rajyotsava (Primary School)

2022 – 23 Photo Gallery

ಕನ್ನಡ ರಾಜ್ಯೋತ್ಸವದ ವರದಿ – ೨೦೨೨ ( ನವೆಂಬರ್)
ನವೆಂಬರ್ ತಿಂಗಳಲ್ಲಿ ನಮ್ಮ ಶಾಲೆ ಸೆಂಟ್ ಮೇರಿಸ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಾರ್ಥನೆ , ಭಾಷಣ , ತರಗತಿವಾರು ಕ್ರಿಯಾತ್ಮಕ ಚಟುವಟಿಕೆಗಳು ( ಕನ್ನಡ ಧ್ವಜದ ಚಿತ್ರ ಬಿಡಿಸುವುದು, ಕೆಂಪು ಮತ್ತು ಹಳದಿ ಮಿಶ್ರಿತ ಟೋಪಿ ಹಾಗು ಬ್ಯಾಡ್ಜ್ ಗಳ ರಚನೆ ) ಶಾಲಾ ಆವರಣದಲ್ಲಿ ಮಕ್ಕಳಿಂದ ಪಥಸಂಚಲನ , ಮುಖ್ಯೋಪಾಧ್ಯಾಯಿನಿಯವರ ಶುಭನುಡಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು . ಒಟ್ಟಾರೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ. ಕಾರ್ಯಕ್ರಮವನ್ನು ನಡೆಸಲು ಅವಕಾಶ ಮಾಡಿಕೊಟ್ಟ ಮುಖ್ಯೋಪಾಧ್ಯಾಯಿನಿಯವರಿಗೂ , ಶಾಲೆಯ ಆಡಳಿತ ಮಂಡಳಿಯವರಿಗೂ , ಶಿಕ್ಷಕರ ವೃಂದಕ್ಕೂ , ವಿದ್ಯಾರ್ಥಿ ವೃಂದಕ್ಕೂ ಮತ್ತು ಪೋಷಕರಿಗೆ ಈ ಮೂಲಕ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಕನ್ನಡ ಶಿಕ್ಷಕಿ
( ಶ್ರೀದೇವಿ )