ಪ್ರಸ್ತುತ ವರ್ಷದ ರಾಜ್ಯೋತ್ಸವದ ಆಚರಣೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.ಭವ್ಯವಾಗಿ ವೇದಿಕೆಯನ್ನು ಅಲಂಕಾರ ಮಾಡಿದ ವಿದ್ಯಾರ್ಥಿಗಳು ಸಮಾರಂಭದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮ ,ಕನ್ನಡದ ಅಭಿಮಾನ ಮೂಡಿಸುವ ಹಾಡು,ನೃತ್ಯ ಪ್ರದರ್ಶನ, ಕಿರುನಾಟಕ, ಸ್ವವಿರಚಿತ ಕವಿತೆಯ ವಾಚನ, ಪುನೀತ ನಮನ, ಶಿಕ್ಷಕರ ಭಾಷಣ ಮುಂತಾದ ಕಾರ್ಯಕ್ರಮಗಳಿಂದ ಇನ್ನಿಲ್ಲದಂತೆ ಕಳೆಗಟ್ಟಿತು.ಪ್ರಾಂಶುಪಾಲರ ನುಡಿ ಅತ್ಯಂತ ಆಪ್ಯಾಯಮಾನವಾಗಿತ್ತು. ಕಾರ್ಯಕ್ರಮದ ನಂತರ ನಾಡಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡಿದ ಎಲ್ಲರಿಗೂ ಶಾಲೆಯ ಕನ್ನಡ ಸಂಘ ‘ಸೌರಭ ‘ ದ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು.
