ಕನ್ನಡ ಸೌರಭ ಸಂಘದ ವರದಿ:
2022-2023 ಆಗಸ್ಟ್ 26 ರಂದು ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾನ್ಯ ಪ್ರಾಂಶುಪಾಲರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಅಂದು ಕನ್ನಡ ಸಂಘದ ಸೌರಭಕ್ಕೆ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು 7 ರಿಂದ 10ನೇ ತರಗತಿಗಳ ತಲಾ ಇಬ್ಬರಂತೆ ಸದಸ್ಯರನ್ನು ನೇಮಕ ಮಾಡಲಾಯಿತು. ಆ ಎಲ್ಲ ಪದಾಧಿಕಾರಿಗಳಿಗೆ ನಮ್ಮ ಮಾನ್ಯ ಪ್ರಾಂಶುಪಾಲರು ಗುರುತಿನ ಫಲಕಗಳನ್ನು ವಿತರಿಸಿ ಅವರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿಸಿ ಕೊಟ್ಟರು. ಹೀಗೆ ನಮ್ಮ ಕನ್ನಡ ಸಂಘ ಸೌರಭದ ಸದಸ್ಯರು […]








